ಕಾಡು ದಾಲ್ಚಿನ್ನಿ ದಾಲ್ಚಿನ್ನಿ ಗಿಡದ ಹತ್ತಿರದ ಸಂಬಂಧಿ ಸಸ್ಯ.ನಿತ್ಯ ಹರಿದ್ವರ್ಣದ ಮರ. == ಸಸ್ಯ ಶಾಸ್ತ್ರೀಯ ವರ್ಗೀಕರಣ == ಇದು ಲಾರೇಸಿ ಕುಂಟುಂಬಕ್ಕೆ ಸೇರಿದೆ.ಸಿನಮೋಮಮ್ ಟಮಾಲ ಇದರ ವೈಜ್ಞಾನಿಕ ನಾಮ. == ಹಂಚಿಕೆ == ಇದು ಭಾರತ, ನೇಪಾಳ,ಭೂತಾನ್ ಮತ್ತು ಚೀನದ ಕಾಡುಗಳಲ್ಲಿ ಕಂಡುಬರುತ್ತದೆ. == ಲಕ್ಷಣಗಳು == ನಿತ್ಯ ಹರಿದ್ವರ್ಣದ ಮರ.ತಮಲಪತ್ರ ಎಂದು ಸಂಸ್ಕೃತದಲ್ಲಿ ಕರೆಯಲ್ಪಡುವ ಇದರ ಎಲೆ ಸಾಂಬಾರು ಪದಾರ್ಥವಾಗಿ ಉಪಯೋಗದಲ್ಲಿದೆ. == ಉಪಯೋಗಗಳು == ಇದರ ಎಲೆಗಳು ಮೊಗಲ್ ವ್ಯಂಜನಗಳಲ್ಲಿ ಹೆಚ್ಚು ಬಳಕೆಯಲ್ಲಿದೆ.ಕೆಲವೊಮ್ಮ ಇದರ ತೊಗಟೆಯನ್ನೂ ಅಡುಗೆಯಲ್ಲಿ ಉಪಯೋಗಿಸುತ್ತಾರೆ. == ಔಷಧೀಯ ಗುಣಗಳು == ಇದರ ಎಲೆಗಳನ್ನು ಮಧುಮೇಹದ ಚಿಕಿತ್ಸೆಯಲ್ಲಿ ಬಳಸುವ ಔಷಧ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. == ಬಾಹ್ಯ ಸಂಪರ್ಕಗಳು == - ' == ಉಲ್ಲೇಖಗಳು ==